
9th April 2025
ಜಿಎಂ ನ್ಯೂಜ್ ಕುಷ್ಟಗಿ : ಇಲ್ಲಿಯ ಶ್ರೀ ಅಡವಿರಾಯ ದೇವಸ್ಥಾನದ ಶ್ರೀ ರಾಮದೇವರ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವವು ಭಾನುವಾರದಂದು ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ಸೀತಾ ರಾಮರಿಗೆ ಮುಂಜಾನೆ 8:00 ಗಂಟೆಗೆ
ಫಲ ಪಂಚಾಮೃತ ಅಭಿಷೇಕ, 9:00 ರಿಂದ 11:30 ರ ವರೆಗೆ ಶ್ರೀ ರಾಮ ತಾರಕ ಮಂತ್ರ ಹೋಮ, ಮಧ್ಯಾಹ್ನ 12:00 ಗಂಟೆಗೆ ಶ್ರೀ ರಾಮ ದೇವರ ತೊಟ್ಟಿಲು ಸೇವೆ, 12:30 ಗಂಟೆಗೆ ಮಹಾ ನೈವೇದ್ಯ , 1:00 ಗಂಟೆಗೆ ಸರ್ವರಿಗೂ ತೀರ್ಥ ಪ್ರಸಾದ ನಡೆಯಿತು.
ಶ್ರೀ ರಾಮ ದೇವರ ಉಸ್ಥವ ಮೂರ್ತಿಯನ್ನು ತೊಟ್ಟಿಲದೊಳಗಿಟ್ಟು ತೂಗಿದ ನಂತರ ಪ್ರತಿಯೊಬ್ಬ ಭಕ್ತರಿಗೂ ಕೋಸಂಬರಿ, ಪಾನಕ ವಿತರಿಸಲಾಯಿತು.
ದೇವಸ್ಥಾನದ ಅರ್ಚಕರಾದ ಶೇಷಾಚಾರ್ ಅವರಿಂದ ಶ್ರೀ ಸೀತಾ ರಾಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾಗೂ ಶ್ರೀ ರಾಮನ ಭಕ್ತ ಶ್ರೀ ಅಡವಿರಾಯ ದೇವಸ್ಥಾನದಲ್ಲಿ ವಾದಿರಾಜಾಚಾರ್ ಅವರಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ವಿಪ್ರ ಸಮಾಜದರೆಲ್ಲರೂ ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಕುಷ್ಟಗಿ ನಗರದ ಶ್ರೀ ಅಡವಿರಾಯ ದೇವಸ್ಥಾನದ ಶ್ರೀ ರಾಮದೇವರ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವವು ಭಾನುವಾರದಂದು ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.
ಭಗವಾನ ಮಹಾವೀರ ಜಯಂತಿ ಆಚರಣೆ ಕುರಿತು ತಹಶೀಲ್ದಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ
ಗಡಿ ತಾಲೂಕು ಆಳಂದನಲ್ಲಿ ಡಿ.ಸಿ. ಸಂಚಾರ: ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರ ಸಮಸ್ಯೆ ಆಲಿಕೆ
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!